೧೯೫೩ ನೇ ಇಸವಿಯ ನಡುವಿನಲ್ಲಿ ರಾಜಾಜಿನಗರ ಬಡಾವಣೆಯು ನಿರ್ಮಾಣವಾಯಿತು. ಈ ಬಡಾವಣೆಯು ಕಾರ್ಮಿಕ ವರ್ಗದವರು ಹಾಗೂ ಕೈಗಾರಿಕಾ ನಿವಾಸಿಗಳ ಬಡಾವಣೆ ಎಂದೇ ಪ್ರಸಿದ್ದಿಯಾಗಿತ್ತು. ಇಂದಿಗೂ ಕೂಡಾ ಕೈಗಾರಿಕಾನಗರ ಎಂದು ಈ ಬಡಾವಣೆಯಲ್ಲಿ ಒಂದು ಅಂಗವಾಗಿ ಉಳಿದುಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಾಗಿ ರಾಜಾಜಿನಗರ ಬಡಾವಣೆಯಲ್ಲಿ ವಾಸಿಸುತ್ತಿದ್ದು, ಈ ಬಡಾವಣೆಯು ಸಾರ್ವಜನಿಕರಿಗೆ ಅನುಕೂಲವಾಗಲು ಒಂದು ಸಹಕಾರಿ ಬ್ಯಾಂಕ್ ಅವಶ್ಯಕತೆ ಇದೆ ಎಂದು, ಅಂದಿನ ಬಡಾವಣೆಯ ಗಣ್ಯರಾದ ಶ್ರೀ ಎಂ.ಆರ್.ನಾಗರಾಜನ್ ಇವರ ನೇತೃತ್ವದಲ್ಲಿ ಸಾರ್ವಜನಿಕ ಸಭೆ ಸೇರಿಸಿ, ಸಹಕಾರ ಬ್ಯಾಂಕಿನ ಅವಶ್ಯಕತೆ ಮತ್ತು ಅನುಕೂಲತೆಗಳನ್ನು ಚರ್ಚೆ ಮಾಡಿ, ಒಂದು ಸಹಕಾರ ಬ್ಯಾಂಕ್ ಇದ್ದರೆ ಜನಗಳಿಗೆ ಸಿಗುವ ಸಹಾಯ ಸವಲತ್ತುಗಳ ಬಗ್ಗೆ ವಿಮರ್ಶಿಸಿದರು. ಎಲ್ಲರ ಸಹಕಾರ ಇದ್ದರೇ ಮಾತ್ರ ಈ ಕಾರ್ಯ ಸಾಧ್ಯ

ಎಂದು ಸಾರ್ವಜನಿಕರಿಗೆ ತಿಳಿಸಿದರು. ಇವರ ಉತ್ತೇಜನದ ಮಾತುಗಳಿಂದ ಪ್ರೇರಿತಗೊಂಡ ಜನರು ಅಂದು ३ ಎಂ.ಆ ರ್.ನಾಗರಾಜನ್ ರವರ ನಾಯಕತ್ವದಲ್ಲಿ ಒಂದು ಸಹಕಾರ ಬ್ಯಾಂಕನ್ನು ಸ್ಥಾಪಿಸಲು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಹಾಗೂ ಸಹಕಾರ ಬ್ಯಾಂಕ್ ನ ಸ್ಥಾಪನೆಗೆ ಎಲ್ಲಾ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ಜನಗಳ ಪ್ರತಿಕ್ರಿಯೆ ಹಾಗೂ ಭರವಸೆಯನ್ನು ಪಡೆದು ೧೯೬೬ ನೇ ಇಸವಿಯ ವಿಜಯದಶಮಿ ಶುಭದಿನದಂದು ದಿ ರಾಜಾಜಿನಗರ ಕೋ-ಆಪರೇಟಿವ್ ಬ್ಯಾಂಕ್ ಲಿ., ಎಂಬ ಹೆಸರಿನಲ್ಲಿ ಸಹಕಾರ ಬ್ಯಾಂಕ್ ಸ್ಥಾಪಿಸುವ ಯೋಜನೆಯನ್ನು ಹಮ್ಮಿಕೊಂಡು ಕೇವಲ ೧೫ ದಿನಗಳಲ್ಲಿ ರೂ.೪೫,೦೦೦-೦೦ -೨- ಶೇರು ಬಂಡವಾಳವನ್ನು ಶೇಖರಿಸಿ, ರಾಜ್ಯ ಸರ್ಕಾರದಿಂದ ಅಧಿಕೃತ ನೋಂದಣಿ ಪಡೆದು, ಆನಂತರ ಠೇವಣಿಯನ್ನು ಸಂಗ್ರಹಿಸಿ, ರೂ.೧,೦೫,೦೦೦-೦0 ಮೊತ್ತದ ಠೇವಣಿಗಳನ್ನು ಸಂಗ್ರಹಿಸಿ, ಭಾರತೀಯ ರಿಜರ್ವ್ ಬ್ಯಾಂಕ್ ನ ಪರವಾನಗಿಯನ್ನು ಪಡೆದು ವ್ಯವಹಾರಗಳನ್ನು ಪ್ರಾರಂಭಿಸಲಾಯಿತು. ಬ್ಯಾಂಕು ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದ ಕಾರಣ ಸ್ವಂತ ಕಟ್ಟಡದಲ್ಲಿ ವ್ಯವಹಾರವನ್ನು ಮಾಡುವುದು ಅಗತ್ಯವೆಂದು ಮನಗಂಡು ೧೯೭೫ ರಲ್ಲಿ ಸ್ವಂತ ಕಟ್ಟಡವನ್ನು ಖರೀದಿ ಮಾಡಿ ನವೀಕರಣಗೊಳಿಸಿ ವ್ಯವಹಾರ ಪ್ರಾರಂಭಿಸಿದರು. ಈ ಕಟ್ಟಡವು ಪುರಾತನವಾದ್ದರಿಂದ, ದಿನೇ ದುರ್ಬಲವಾಗುತ್ತಿರುವುದು ಕಂಡು ಬಂದು ಹಾಗೂ ಸದಸ್ಯರುಗಳ ಬಹು ದಿನದ ಕೋರಿಕೆಯನ್ನು ನೆರವೇರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಕಾರಣ, ಹಾಲಿ ಆಡಳಿತ ಮಂಡಳಿ ಸದಸ್ಯರುಗಳು ಈ ಕಟ್ಟಡವನು ಕೆಡವಿ ನವ್ಯ ಶೈಲಿಯಲ್ಲಿ ಭವ್ಯವಾದ ಕಟ್ಟಡವನ್ನು ಬ್ಯಾಂಕಿನ ವ್ಯವಹಾರಕ್ಕೆ ಅನುಗುಣವಾಗುವಂತೆ ನಿರ್ಮಾಣ ಮಾಡಲು ತೀರ್ಮಾನಿಸಿ, ಕಾರ್ಯಗತಗೊಳಿಸಿ, ಇಂದು ಅದರ ಪ್ರಾರಂಭೋತ್ಸವದ ಸಮಾರಂಭವನ್ನು ದಿನಾಂಕ ೬-೯-೨೦೦೯ ರಂದು ನಡೆಸಲಾಯಿತು. ಬ್ಯಾಂಕಿನ ಪ್ರಗತಿಯ ಪಥದಲ್ಲಿ ಒಂದು ಮೈಲಿಗಲ್ಲಾಗಿದೆ. ಈ ಸುಸಂದರ್ಭದಲ್ಲಿ ಬ್ಯಾಂಕಿನ ಸಂಸ್ಥಾಪಕ ಸದಸ್ಯರುಗಳಾದ ಶ್ರೀ ಎಂ.ಆರ್.ನಾಗರಾಜನ್, ದಿವಂಗತ ಪುಂಗನೂರು, ದಿವಂಗತ ವಿ.ಎಸ್.ಜಯಾಚಾರ್ಯ, ದಿವಂಗತ ವಿ.ಆರ್.ಹೆಗಡೆ, ದಿವಂಗತ ಜೆ.ಎಂ.ನಾಯುಕ್, ಶ್ರೀ ಬಿ.ನಾರಾಯಣ, ಶ್ರೀ ಬಿ.ಎನ್.ಶೆಟ್ಟಿ, ದಿವಂಗತ ಕೆ.ವಿ.ಸುಬ್ಬರಾಯ, ದಿವಂಗತ ಎಂ.ಎಸ್.ನಾಗರಾಜ, ದಿವಂಗತ ಎಸ್.ಶಾಮಣ್ಣ, ಶ್ರೀ ವಿ.ಕೃಷ್ಣ, ದಿವಂಗತ ಎ.ಜಿ.ದೇಶಪಾಂಡೆ, ಶ್ರೀ ಎಸ್.ಎನ್.ಬಾಗಲಕೋಟಕರ್, ದಿವಂಗತ ಎಸ್.ಎನ್.ಲಲಿತಮ್ಮ, ದಿವಂಗತ ರಾಮಮೂರ್ತಿ, ದಿವಂಗತ ಸೆಲ್ವರಾಜ್, ದಿವಂಗತ ಪಳನಿಯಪ್ಪನ್, ದಿವಂಗತ ಕೆ.ಬಿ.ಕೃಷ್ಣಪ್ಪ, ದಿವಂಗತ ಗುರುನಂಜಯ್ಯ ಇವರುಗಳನ್ನು ಸ್ಮರಿಸುವುದು ನಮ್ಮ ಧರ್ಮ. ಹಾಲಿ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದ ಶ್ರೀ ಬಿ.ಎನ್.ವೆಂಕಟಸುಬ್ಬ ರಾವ್ ರವರು ದಿನಾಂಕ ೨೪-೬-೨೦೦೯ ರಂದು ನಿಧನ ಹೊಂದಿರುತ್ತಾರೆ. ಇವರುಗಳನ್ನು ಸ್ಮರಿಸುವುದು ಬ್ಯಾಂಕಿನ ಧರ್ಮ. ಅಂದಿನಿಂದ ಇಂದಿನವರೆಗೂ ಹೆಮ್ಮರವಾಗಿ ಬೆಳೆದು ಇಂದು ರೂ.೧೦೦ ಕೋಟಿಗೂ ಮೀರಿ ಠೇವಣೆ ಹೊಂದಿರುವುದು ಸಂತೋಷದ ವಿಷಯ. ಬಾಗೇ -೩- ರೂ.೯೨ ಕೋಟಿ ಹಣವನ್ನು ನಾನಾ ವಿಧದ ಉದ್ದೇಶಗಳಿಗೆ ಸಾಲ ವಿತರಣೆ ಮಾಡಿರುವುದು ಸಹಾ ಬ್ಯಾಂಕಿನ

ಸಹಾ ಬ್ಯಾಂಕಿನ ಬೆಳವಣಿಗೆಗೆ ಸಾಕ್ಷಿಯಾಗಿರುತ್ತದೆ. ರೂ.೪.೯೪ ಕೋಟಿ ಶೇರು ಬಂಡವಾಳವನ್ನು ಹೊಂದಿದ್ದು, ಆಪದ್ದನ ಮತ್ತು ಇತರೆ ನಿಧಿಗಳು ರೂ.೧೪.೫೨ ಕೋಟಿ ಹೊಂದಿದ್ದು, ರೂ.೫೬.೫೧ ಕೋಟಿ ವಿನಿಯೋಗಗಳು ಮಾಡಿ, ದಿನಾಂಕ ೩೧.೩೨೦೦೯ ಕ್ಕೆ ಆದಾಯ ತೆರಿಗೆ ಪಾವತಿಸಿದ ನಂತರ ರೂ.೧.೯೩ ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ. ಎನ್.ಪಿ.ಎ.ಪ್ರಮಾಣವು ಒಟ್ಟು ಇರುತ್ತದೆ. ರಿಂದ ಶೇ.೫.೪೦ ಇದ್ದು, ವಿವ್ವಳ ಎನ್.ಪಿ.ಎ. ಶೇಕಡಾವಾರು 0 ಸಿ.ಆರ್.ಎ.ಆರ್.ನ ಪ್ರಮಾಣವು ಶೇಕಡ ೧೯.೧೪ ಇದ್ದು, ಬ್ಯಾಂಕಿನ ಬುನಾದಿಯ ಭದ್ರತೆಯ ಬಗ್ಗೆ ಎತ್ತಿ ತೋರುತ್ತದೆ. ರೂ.೧೩೩.೧೦ ಕೋಟಿ ದುಡಿಯುವ ಬಂಡವಾಳ ಹೊಂದಿರುತ್ತದೆ.

ಹೊಂದಿರುತ್ತದೆ. ಬ್ಯಾಂಕು ಪ್ರಾರಂಭದಿಂದಲೂ ಲೆಕ್ಕಪರಿಶೋಧನೆಯಲ್ಲಿ 'ಎ' ಶ್ರೇಣಿ ಗಳಿಸಿರುತ್ತದೆ. ೧೯೬೬ ರಿಂದ ಇಲ್ಲಿಯವರುಗೂ ಬ್ಯಾಂಕಿನ ಬೆಳಗಣಿಗೆಗೆ ಈ ಹಿಂದೆ ಅನೇಕ ಗಣ್ಯರು ಶ್ರಮ ಪಟ್ಟಿರುವುದು ಗಮನಾರ್ಹ. ಇವರುಗಳಲ್ಲಿ ಶ್ರೀ ಪಳನಿಯಪ್ಪನ್, ಅವರ ಪಾತ್ರ ಮಹತ್ವವಾದದ್ದು, ಅವರ ದಕ್ಷ ಆಡಳಿತ ಹಾಗೂ ಕ್ರಮದಿಂದ ಅವರ ಅವಧಿಯಲ್ಲಿ ಅನೇಕ ಬದಲಾವಣೆಗಳನ್ನು ತಂದು ಬ್ಯಾಂಕನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಕ್ರೀಯ ಪಾತ್ರವನ್ನು ವಹಿಸಿದ್ದರು. ಅದೇ ರೀತಿ ೧೬ ವರ್ಷಗಳ ಅವಧಿಯ ಕಾಲ ಅಧ್ಯಕ್ಷರಾಗಿದ್ದ ಶ್ರೀ ಜಿ.ಜಯರಾಂರವನ್ನು ಮರೆಯಲು ಸಾಧ್ಯವೇ ಇಲ್ಲಾ. ಇವರ ಅವಧಿಯಲ್ಲಿ ಒಂದು ಶಾಖೆಯನ್ನು ಬಸವೇಶ್ವರನಗರದಲ್ಲಿ ಪ್ರಾರಂಭ ಮಾಡಿ, ಅಲ್ಲಿ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲು ಕಾರಣಕರ್ತರಾದರು. ಹಾಗೆಯೇ ಅವರ ಅಧ್ಯಕ್ಷತೆಯಲ್ಲಿ ಅನ್ನಪೂರ್ಣೇಶ್ವರಿನಗರದಲ್ಲಿ ವಿಸ್ತರಣಾ ಶಾಖೆಯನ್ನು ಪ್ರಾರಂಭ ಮಾಡಲಾಯಿತು. ಅದು ಇಂದು ಪೂರ್ಣ ಪ್ರಮಾಣದ ಶಾಖೆಯಾಗಿ ಪರಿವರ್ತನೆ ಆಗಿ ಕಾರ್ಯ ನಿರ್ವಹಿಸುತ್ತಿದೆ. ಶಾಖೆಗಾಗಿ ಒಂದು ನಿವೇಶನವನ್ನು ಪಡೆಯಲು ರಾಜಾಜಿನಗರ ಗೃಹನಿರ್ಮಾಣ ಸಹಕಾರ ಸಂಘಕ್ಕೆ ಮನವಿ ಮಾಡಿಕೊಂಡಾಗ ಸಂಘದ ಕಾರ್ಯಕಾರಿ ಮಂಡಳಿಯವರು ಶಾಖೆಗಾಗಿ -೪- ೪೦ ಟಿ ೬೦ ಅಡಿ ಅಳತೆಯ ಒಂದು ನಿವೇಶನವನ್ನು ಅಧ್ಯಕ್ಷರಾದ ಶ್ರೀ ಕೆ.ಎಲ್.ತಿಮ್ಮಪ್ಪ ರವರು ಹಂಚಿಕೆ ಮಾಡಿದರು. ಇದಕ್ಕೆ ನಾವು ಸದರೀ ಸಂಘಕ್ಕೆ ಅಭಾರಿಯಾಗಿರುತ್ತೇವೆ.

ಈ ಎಲ್ಲಾ ಸಾಧನೆಗಳು ಅವರ ಅವಧಿಯಲ್ಲಿ ಕಂಡ ವಿಶೇಷ ಬೆಳವಣಿಗೆಗಳು. ಅಂದಿನಿಂದ ಇಂದಿನವರೆಗೂ ಅನೇಕ ಅಧ್ಯಕ್ಷರು, ಉಪಾಧ್ಯಕ್ಷರು, ಇತರೆ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳು ಬ್ಯಾಂಕಿನ ಬೆಳವಣಿಗೆಗಾಗಿ ದುಡಿದಿದ್ದು, ಎಲ್ಲರ ಹೆಸರುಗಳನ್ನು ಇಲ್ಲಿ ಪಠಿಸಲಾಗದಿದ್ದರೂ ಸಹಾ ಅವರುಗಳನ್ನು ಸ್ಮರಿಸಲಾಗಿದೆ. ಬ್ಯಾಂಕಿನ ಪ್ರಾರಂಭದಿಂದಲೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರ ದಿವಂಗತ ಪುಂಗನೂರ್, ದಿವಂಗತ ಜಯಚಾರ್ಯ, ದಿವಂಗತ ನಾರಾಯಬ್.ಬಿ. ಶ್ರೀ ಎಂ.ಆರ್.ನಾಗರಾಜನ್, ದಿವಂಗತ ಪಿ. ಪಳನಿಯಪ್ಪನ್, ದಿವಂಗತ ವಿ.ಕೃಷ್ಣ, ದಿವಂಗತ ಕೆ.ಬಿ.ಕೃಷ್ಣಪ್ಪ ದಿವಂಗತ ಎಂ.ರಾಮಮೂರ್ತಿ, ದಿವಂಗತ ಜಿ.ಜಯರಾಂ, ಶ್ರೀ ಎಸ್.ಎಂ.ಮಲ್ಲಯ್ಯ ದಿವಂಗತ ಕೆ.ವಿ.ಸುಬ್ಬರಾಯ ಇವರುಗಳು ಅಂದಿನಿಂದ ಇಂದಿನವರೆಗೂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಂದು ಬ್ಯಾಂಕು ೨ ಶಾಖೆಗಳನ್ನು ಹೊಂದಿದ್ದು, ಬಸವೇಶ್ವರನಗರ ಶಾಖೆಯು ೧೯೯೬ ರಲ್ಲಿ ಪ್ರಾರಂಭಗೊಂಡು ಸ್ವಂತ ಕಟ್ಟಡದಲ್ಲಿ ಉತ್ತಮವಾಗಿ ವ್ಯವಹಾರ ನಿರ್ವಹಿಸುತ್ತಿದೆ. ಅನ್ನಪೂರ್ಣೇಶ್ವರಿನಗರ ಶಾಖೆಯನ್ನು ಸಧ್ಯದಲ್ಲಿ ಬಾಡಿಗೆ ಕಟ್ಟಡದಲ್ಲಿ ವ್ಯವಹಾರ ಮಾಡಲಾಗುತ್ತಿದ್ದು, ಶಾಖೆಯ ಸಮಿಪದಲ್ಲಿ ಪಡೆದಿರುವ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡಿ ಸ್ವಂತದಾದ ಕಟ್ಟಡದಲ್ಲಿ ಶಾಖೆಯ ವ್ಯವಹಾರವನ್ನು ನಡೆಸುವ ಯೋಜನೆ ಇದೆ. ೧೯೬೬ ರಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಮಾಡಿರುವ ಸಾಧನೆಗಳಲ್ಲಿ ಸದಸ್ಯರುಗಳ, ಗ್ರಾಹಕರುಗಳ ಹಾಗೂ ನಮ್ಮ ಸಿಬ್ಬಂದಿಯವರುಗಳ ಪಾತ್ರವು ಗಣನೀಯವಾಗಿದ್ದು, ನಮ್ಮ ಸಿಬ್ಬಂದಿ ವರ್ಗದವರು ಸದಸ್ಯರುಗಳಿಗೂ ಮತ್ತು ಗ್ರಾಹಕರುಗಳಿಗೂ ದಕ್ಷತೆ ಹಾಗೂ ನಿಷ್ಠೆಯಿಂದ ಸೇವೆಯನ್ನು ಸಲ್ಲಿಸಿ,

ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿರುವುದು ಆನಂದಕರ ವಿಷಯ. ದಿನಾಂಕ ೨೩-೧೨-೧೯೯೨ ರಂದು ವಿಜೃಂಭಣೆಯಾಗಿ ಬೆಳ್ಳಿಹಬ್ಬವನ್ನು ಆಚರಿಸಿ, ಅಂದಿನ ಮುಖ್ಯ ಮಂತ್ರಿಗಳನ್ನು, ಸಹಕಾರ ಮಂತ್ರಿಗಳನ್ನು ಹಾಗೂ ಇತರೆ ఇలాఖా ಅಧಿಕಾರಿಗಳನ್ನು ಆಹ್ವಾನಿಸಿ, ಮತ್ತೊಂದು ಮೈಲಿಗಲ್ಲನ್ನು ಸೃಷ್ಟಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ -೫ ಸದಸ್ಯರುಗಳಿಗೂ ನೆನಪಿನ ಕಾಣಿಕೆಯನ್ನೂ ಸಹಾ ನೀಡಲಾಗಿತ್ತು. ಭವ್ಯವಾದ ನೂತನ ಕಟ್ಟಡದ ಉದ್ಘಾಟನೆಯನ್ನು ದಿನಾಂಕ ೬-೯-೨೦೦೯ ರಂದು ನಮ್ಮ ರಾಜಾಜಿನಗರ ಕ್ಷೇತ್ರದ ಶಾಸಕರು, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಮತ್ತು ನಗರಾಭಿವೃದ್ಧಿ ಸಚಿವರಾದ ಸನ್ಮಾನ್ಯ ಶ್ರೀ ಎಸ್.ಸುರೇಶ್ ಕುಮಾರ್ ಅವರ ಅಮೃತ ಹಸ್ತದಿಂದ ಉದ್ಘಾಟನೆ ಮಾಡಿರುವುದು ನಮ್ಮೆಲ್ಲರ ಭಾಗ್ಯ ಹಾಗೂ ಈ ಸಮಾರಂಭಕ್ಕೆ ಮಾಜಿ ಸಚಿವರು ಮತ್ತು ರಾಷ್ಟ್ರೀಯ/ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷರು ಆದ ಶ್ರೀ ಹೆಚ್.ಕೆ.ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿರುವುದು ನಮ್ಮೆಲ್ಲರ ಸೌಭಾಗ್ಯ ಸಹಕಾರ ಮಂತ್ರಿ ಶ್ರೀ ಲಕ್ಷಣ ಸವದಿಯವರು ಆಗಮಿಸಬೇಕಾಗಿದ್ದು, ಅರು ಕಾರಣಾಂತರದಿಂದ ವಿದೇಶ ಪ್ರವಾಸ ಕೈಗೊಂಡಿರುವುದರಿಂದ, ಅವರ ಪರವಾಗಿ

ಸಹಕಾರ ಸಂಘಗಳ ಅಡಿಷನಲ್ ರಿಜಿಸ್ಟ್ರಾರ್ ಆದ ಶ್ರೀ ರಮೇಶ್ ರವರು ಪ್ರತಿನಿಧಿಸಿದ್ದರು. ಅವರೂ ಕೂಡಾ ಸಮಾರಂಭಕ್ಕೆ ಬಂದಿರುವುದು ನಮಗೆ ಸಂತೋಷದ ವಿಷಯ. ಹಾಗೂ ನಮ್ಮ ಕರೆಯೋಲೆಗೆ ಹೂಗುಟ್ಟು ಆಗಮಿಸಿರುವ ಎಲ್ಲಾ ಗಣ್ಯರು, ಇಲಾಖಾಧಿಕಾರಿಗಳು ಭಾಗವಹಿಸಿರುವುದು ನಮ್ಮೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಹೇಳಬೇಕಾದರೆ, ನಮ್ಮ ಸದಸ್ಯರುಗಳು ಬ್ಯಾಂಕಿನಿಂದ ತೆಗೆದುಕೊಂಡ ಸಾಲಗಳನ್ನು ಕಾಲಕಾಲಕ್ಕೆ ಸರಿಯಾಗಿ ಮರುಪಾವತಿ ಮಾಡಿರುವುದರಲ್ಲಿ ಸಂ ರೀತಿಯಲ್ಲಿ ಬ್ಯಾಂಕಿನಲ್ಲಿ ದೊರಕುವ ಸವಲತ್ತುಗಳನ್ನು ಪಡೆದು, ಬ್ಯಾಂಕನ್ನು ಸಂದೇಹವಿಲ್ಲ. ಇನ್ನೂ ಹೆಚ್ಚಿನ ಇನ್ನೂ ಉತ್ತಮ ರೀತಿಯಲ್ಲಿ ಹೆಚ್ಚಿಸಲು ಸದಸ್ಯರು, ಗ್ರಾಹಕರು, ಸಿಬ್ಬಂದಿ ವರ್ಗದವರು ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು ಶ್ರಮವಹಿಸಿದರೆ ಬ್ಯಾಂಕು ಇನ್ನೂ ಉನ್ನತ ಮಟ್ಟಕ್ಕೆ ಏರುವುದರಲ್ಲಿ ಸಂದೇಹವಿಲ್ಲ.

ಸಹಕಾರ ಸಂಘಗಳ ಅಡಿಷನಲ್ ರಿಜಿಸ್ಟ್ರಾರ್ ಆದ ಶ್ರೀ ರಮೇಶ್ ರವರು ಪ್ರತಿನಿಧಿಸಿದ್ದರು. ಅವರೂ ಕೂಡಾ ಸಮಾರಂಭಕ್ಕೆ ಬಂದಿರುವುದು ನಮಗೆ ಸಂತೋಷದ ವಿಷಯ. ಹಾಗೂ ನಮ್ಮ ಕರೆಯೋಲೆಗೆ ಹೂಗುಟ್ಟು ಆಗಮಿಸಿರುವ ಎಲ್ಲಾ ಗಣ್ಯರು, ಇಲಾಖಾಧಿಕಾರಿಗಳು ಭಾಗವಹಿಸಿರುವುದು ನಮ್ಮೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಹೇಳಬೇಕಾದರೆ, ನಮ್ಮ ಸದಸ್ಯರುಗಳು ಬ್ಯಾಂಕಿನಿಂದ ತೆಗೆದುಕೊಂಡ ಸಾಲಗಳನ್ನು ಕಾಲಕಾಲಕ್ಕೆ ಸರಿಯಾಗಿ ಮರುಪಾವತಿ ಮಾಡಿರುವುದರಲ್ಲಿ ಸಂದೇಹವಿಲ್ಲ. ಇನ್ನೂ ಹೆಚ್ಚಿನ ರೀತಿಯಲ್ಲಿ ಬ್ಯಾಂಕಿನಲ್ಲಿ ದೊರಕುವ ಸವಲತ್ತುಗಳನ್ನು ಪಡೆದು, ಬ್ಯಾಂಕನ್ನು ಇನ್ನೂ ಉತ್ತಮ ರೀತಿಯಲ್ಲಿ ಹೆಚ್ಚಿಸಲು ಸದಸ್ಯರು, ಗ್ರಾಹಕರು, ಸಿಬ್ಬಂದಿ ವರ್ಗದವರು ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು ಶ್ರಮವಹಿಸಿದರೆ ಬ್ಯಾಂಕು ಇನ್ನೂ ಉನ್ನತ ಮಟ್ಟಕ್ಕೆ ಎರುವುದರಲ್ಲಿ ಸಂದೇಹವಿಲ್ಲ._______